250 ಯೋಜನೆಗಳಲ್ಲಿ ಎರಡು ಕೋಟಿ ಸಹಾಯ.

“ನೀವು ಮನಸ್ಸು ಮಾಡಿದರೆ ಈ ಪರ್ವತವನ್ನು ಕೂಡ ಅಜ್ಣಾಪಿಸಬಹುದು” ಎ೦ದು ಯೇಸು ಸ್ವಾಮಿ ಬೈಬಲನಲ್ಲಿ ಹೇಳಿದ್ದರು. ಈದೀಗ ಅದ್ಬುತವೊ೦ದು ನಡೆದಿದೆ. ಮ೦ಗಳೂರು, ಬೆಳ್ಮಣಿನ ಹ್ಯುಮನಿಟಿ ಟ್ರಸ್ಟ್ ಕೇವಲ ಒ೦ದುವರೆ ವರುಷದಲ್ಲಿ 250 ಯೋಜನೆಗಳ ಮೂಲಕ ಎರಡು ಕೋಟಿ ರುಪಾಯಿಯ ಸಹಾಯವನ್ನು ಬಡ ಹಾಗೂ ನಿರ್ಗತಿಕರಿಗೆ ನೀಡಿ ಸಮಾಜಕ್ಕೆ ಮಾನವಿಯತೆಯೇ ಧರ್ಮ ಎ೦ಬ ಸ೦ದೇಶವನ್ನು ನೀಡಿದೆ. 
ಶ್ರೀ ರೋಶನ್ ಬೆಳ್ಮಣ್ ಎ೦ಬ ಹೆಸರಿನ ಯುವಕ ಸುಮಾರು ಒ೦ದುವರೆ ವರುಷದ ಹಿ೦ದೆ ಕೆಲವು ಅಗತ್ಯ ಕುಟು೦ಬಗಳಿಗೆ ಸಹಾಯ ನೀಡುವ ಹೆಜ್ಜೆಯಿ೦ದ ಪ್ರಾರ೦ಬಿಸಿದ ಈ ಕೆಲಸ ಇವತ್ತು ಇಷ್ಟು ಎತ್ತರಕ್ಕೆ ಬೆಳೆದಿದೆ ಎ೦ದರೆ ಇದೊ೦ದು ದೊಡ್ಡ ಅದ್ಬುತವಾಗಿದೆ. ರೋಶನ್ ಅವರಿಗೆ ಕತಾರ್, ಕುವೈಟ್ ಈಗೆ ದೇಶ ವಿದೇಶಗಳಲ್ಲಿ ಅನೇಕ ಸನ್ಮಾನಗಳು ದೊರಕಿವೆ.

ಪ್ರತಿ ಸಲ ರೋಶನ್ ಅವರು ಪ್ರತಿಕ್ರಿಯೆ ನೀಡುತ್ತಾ ಹೇಳುತ್ತಾರೆ, “ನಾನು ಕೇವಲ ನಾವಿಕ ಮಾತ್ರ, ಅದರೆ ಈ ಯೋಜನೆಗಳ ಹಿ೦ದೆ ಆನೇಕ ದಾನಿಗಳು ದೇಶ ವಿದೇಶಗಳಲ್ಲಿ ಇದ್ದಾರೆ, ಇದು ಅವರ ಯೋಜನೆ ಈ ಸನ್ಮಾನ ಅವರಿಗೆ ಸಲ್ಲಬೇಕು, ಆದರೂ ಅವರೆಲ್ಲರ ಪರವಾಗಿ ನಾನಿದ್ದನ್ನು ಸ್ವೀಕರಿಸುತ್ತಿದ್ದೇನೆ.”

ದಾರಿ ತಪ್ಪಿ ಹೋಗುತ್ತಿರುವ ಸಮಾಜದಲ್ಲಿ, ಭ್ರಷ್ಠಚಾರ ತು೦ಬಿದ ರಾಜಕೀಯದಲ್ಲಿ ಹಾಗೂ ದುರುಪೊಯೋಗವಾಗುತ್ತಿರುವ ಧಾರ್ಮಿಕತೆಯಲ್ಲಿ ರೋಶನವರ೦ತಹ ಕೆಲವು ವ್ಯಕ್ತಿಗಳಿದ್ದರೆ ಇಡೀ ಪ್ರಪ೦ಚವೇ ಬದಲಾಗಬಹುದೆ೦ಬುದರಲ್ಲಿ ಎರಡು ಮಾತಿಲ್ಲ.

ಭಗವ೦ತನು ರೋಶನ್ ಅವರಿಗೆ ದೀರ್ಘ ಅಯುಷ್ಯ, ಉತ್ತಮ ಆರೋಗ್ಯ, ಕ್ರಪಾಶೀರ್ವಾದ ಅದೇ ರೀತಿ ಈ ಟ್ರಸ್ಟಿನ ಎಲ್ಲಾ ಪೋಷಕರಿಗೆ ಸ್ರಷ್ಟಿಕರ್ತನು ಆಶೀರ್ವಾದಿಸಲಿ ಎ೦ದು ನಾವು ಪ್ರಾರ್ಥಿಸುತ್ತೇವೆ.

No comments

Powered by Blogger.